ಇಸ್ಲಾಮಾಬಾದ್: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿರುವ ಕುರಿತು ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.

ತಿಹಾರ್ ಜೈಲಿನಿಂದ ಕೇಜ್ರಿವಾಲ್ ಬಿಡುಗಡೆಯಾಗಿರುವ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮೋದಿ ಜೀ ಅವರು ಮತ್ತೊಂದು ಯುದ್ಧದಲ್ಲಿ ಸೋಲು ಕಂಡಿದ್ದಾರೆ. ಕೇಜ್ರಿವಾಲ್ ಅವರ ಬಿಡುಗಡೆಯು ಭಾರತೀಯರಿಗೆ ಒಳ್ಳೆಯ ಸಂದೇಶ’ ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಕಾನೂನು ಅಪಾಯದಲ್ಲಿದೆ ಎಂದೂ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಚೌಧರಿ ಅವರು ಬೇರೆ ಬೇರೆ ಪ್ರಕರಣಗಳಲ್ಲಿ ಬಂಧಿಯಾಗಿದ್ದರು.

ಇಮ್ರಾನ್ ಖಾನ್ ಸಂಪುಟದಲ್ಲಿ ಸಚಿವರಾಗಿದ್ದ ಚೌಧರಿ ಫವಾದ್ ಹುಸೇನ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ರಾಹುಲ್ ಗಾಂಧಿಗೆ ಸಂಬಂಧಿಸಿದ ವಿಡಿಯೊವನ್ನು ಪೋಸ್ಟ್ ಮಾಡಿ, ಅವರನ್ನು ಹೊಗಳಿರುವುದಾಗಿ ವರದಿಯಾಗಿತ್ತು. ಅದರ ಬೆನ್ನಲ್ಲೇ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು.

‘ಪಾಕಿಸ್ತಾನ ಮತ್ತು ಕಾಂಗ್ರೆಸ್ ನಡುವಣ ನಂಟು ಈಗ ಸಂಪೂರ್ಣವಾಗಿ ಬಹಿರಂಗಗೊಂಡಿದೆ. ನಮ್ಮ ಶತ್ರುಗಳು ಭಾರತದಲ್ಲಿ ದುರ್ಬಲ ಸರ್ಕಾರವನ್ನು ಬಯಸುವರು. ಆದರೆ ಮೋದಿ ನೇತೃತ್ವದ ಬಲಿಷ್ಠ ಸರ್ಕಾರ ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಪ್ರಧಾನಿ ಮೋದಿ ಹೇಳಿದ್ದರು.
.Arvind Kejriwal Bail Highlights | ಕೇಜ್ರಿವಾಲ್ ಬಿಡುಗಡೆ, ಪೀಠ ಹೇಳಿದ್ದೇನು?.ಮಧ್ಯಂತರ ಜಾಮೀನು: 50 ದಿನಗಳ ಬಳಿಕ ಜೈಲಿನಿಂದ ಹೊರಬಂದ ಅರವಿಂದ ಕೇಜ್ರಿವಾಲ್.ಚುನಾವಣಾ ಪ್ರಚಾರ ಮೂಲಭೂತ ಹಕ್ಕಲ್ಲ: ಕೇಜ್ರಿವಾಲ್ ಮಧ್ಯಂತರ ಜಾಮೀನಿಗೆ ಇ.ಡಿ ವಿರೋಧ.PHOTOS | ಜೈಲಿನಿಂದ ಅರವಿಂದ ಕೇಜ್ರಿವಾಲ್ ಬಿಡುಗಡೆ– ಎಎಪಿ ಕಾರ್ಯಕರ್ತರ ಸಂಭ್ರಮ.ಶತ್ರುಗಳ ಜತೆ ಕೈಜೋಡಿಸಿದ ಕಾಂಗ್ರೆಸ್: ಯೋಗಿ ಆದಿತ್ಯನಾಥ್.ಕೇರಳದಲ್ಲಿ ಮೋದಿ, ರಾಹುಲ್ ಪ್ರಚಾರ ಸಭೆ: ಮಾತಿನ ಸಮರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.