ಅಹಮದಾಬಾದ್: ಮದ್ಯಪಾನವು ಕೆಟ್ಟದ್ದಲ್ಲ. ವೈದ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಜಗತ್ತಿನಾದ್ಯಂತ ಮದ್ಯ ಸೇವಿಸುತ್ತಿದ್ದು, ಗುಜರಾತ್ನಲ್ಲಿ ಮಾತ್ರ ನಿಷೇಧ ಜಾರಿಯಲ್ಲಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಜಗಮಲ್ ವಾಲಾ ಹೇಳಿಕೆಯು ವಿವಾದಕ್ಕೀಡಾಗಿದೆ.

ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸೋಮನಾಥ್ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ಜಗಮಲ್, ಸಾರ್ವಜನಿಕ ಪ್ರಚಾರ ರ್ಯಾಲಿಯಲ್ಲಿರಾಜ್ಯದಲ್ಲಿ ಮದ್ಯ ನಿಷೇಧಿಸಿರುವುದನ್ನು ಪ್ರಶ್ನಿಸಿದ್ದಾರೆ.

ಇದರ ವಿರುದ್ಧ ಆಡಳಿತಾರೂಢ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗುಜರಾತ್ಗೆ ಮಾನಹಾನಿ ಮಾಡಿದ್ದಕ್ಕಾಗಿ ಮತ್ತು ಮದ್ಯಪಾನವನ್ನು ಉತ್ತೇಜಿಸಿದ್ದಕ್ಕಾಗಿ ಜಗಮಲ್ ಕ್ಷಮೆಯಾಚಿಸಬೇಕು ಎಂದು ಬಯಸಿದೆ.

ಇದನ್ನೂ ಓದಿ:ಇದೇ 25ರಂದು ಐಎನ್ಎಲ್ಡಿ ರ್ಯಾಲಿ: ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ?

ಜಗತ್ತಿನಲ್ಲಿ 196 ದೇಶಗಳಿದ್ದು, 800 ಕೋಟಿ ಜನರಿದ್ದಾರೆ. ಈ ಎಲ್ಲ ದೇಶಗಳಲ್ಲಿ ಮದ್ಯ ಸೇವಿಸುವ ಸ್ವಾತಂತ್ರ್ಯವಿದೆ. ಭಾರತದಲ್ಲೇ 130ರಿಂದ 140 ಕೋಟಿ ಜನರಿದ್ದು, ಇಡೀ ದೇಶದಲ್ಲಿ ಕುಡಿಯುವ ಸ್ವಾತಂತ್ರ್ಯವಿದೆ. ಆದರೆ 6.5 ಕೋಟಿ ಜನರಿರುವ ಗುಜರಾತ್ನಲ್ಲಿ ಮಾತ್ರ ಮದ್ಯಪಾನಕ್ಕೆ ನಿಷೇಧವಿದೆ. ಇದರಿಂದ ಮದ್ಯಪಾನ ಕೆಟ್ಟದ್ದಲ್ಲ ಎಂಬುದು ಸಾಬೀತಾಗಿದೆ. ಮದ್ಯವು ನಮ್ಮನ್ನಲ್ಲ, ನಾವು ಮದ್ಯವನ್ನು ಸೇವಿಸಬೇಕು. ಹಾಗಾದ್ದಲ್ಲಿ ಅದು ಕೆಟ್ಟದ್ದಲ್ಲ. ಧೈರ್ಯವಿದ್ದರೆ ಕುಡಿಯಿರಿ. ವೈದ್ಯರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೂ ಮದ್ಯ ಸೇವಿಸುತ್ತಾರೆ ಎಂದು ಜಗಮಲ್ ಹೇಳಿದ್ದರು.

ಜಗಮಲ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ವಕ್ತಾರ ಯಜ್ಞೇಶ್ ದಾವೆ, ದೆಹಲಿಯಲ್ಲಿ ಇವರ ಪಕ್ಷದ ಅಧ್ಯಕ್ಷರು ಯಥೇಚ್ಚವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಅಂತಹ ಪಕ್ಷದ ವ್ಯಕ್ತಿಯಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.