ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರಾಖಂಡ | ಅಮೆರಿಕ, ಬ್ರಿಟನ್ ಚಾರಣಿಗರ ರಕ್ಷಣೆಗೆ ವಾಯುಪಡೆಯ ಹೆಲಿಕಾಪ್ಟರ್

Published : 4 ಅಕ್ಟೋಬರ್ 2024, 11:35 IST
Last Updated : 4 ಅಕ್ಟೋಬರ್ 2024, 11:35 IST
ಫಾಲೋ ಮಾಡಿ
Comments

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿರುವ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆಗೆ ಹೆಲಿಕಾಪ್ಟರ್ ಮೂಲಕ ಭಾರತೀಯ ವಾಯಪಡೆಯು (ಐಎಎಫ್) ಇಂದು (ಶುಕ್ರವಾರ) ಕಾರ್ಯಾಚರಣೆ ಆರಂಭಿಸಿದೆ.

ಅಮೆರಿಕ ಹಾಗೂ ಬ್ರಿಟನ್‌ನ ಚಾರಣಿಗರ ರಕ್ಷಣೆಗೆ ಬೆಳಿಗ್ಗೆ 8ಕ್ಕೆ ಹುಡುಕಾಟ ಪ್ರಾರಂಭಿಸಲಾಯಿತು ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಸಿ) ತಿಳಿಸಿದೆ.

ಚೌಖಂಬದಲ್ಲಿ ಸುಮಾರು 6,500 ಮೀಟರ್ ಎತ್ತರದಲ್ಲಿ ಲಾಜಿಸ್ಟಿಕಲ್ ಮತ್ತು ತಾಂತ್ರಿಕ ಉಪಕರಣಗಳು ಕೆಳಗೆ ಬಿದ್ದ ಕಾರಣ ಪರ್ವತಾರೋಹಿಗಳು ಅಪಾಯಕ್ಕೆ ಸಿಲುಕಿದ್ದಾರೆ ಎಂದು ಎಸ್‌ಇಒಸಿ ತಿಳಿಸಿದೆ.

ಈ ಕುರಿತು ಮಾಹಿತಿ ದೊರೆತ ಕೂಡಲೇ ಚಮೋಲಿ ಜಿಲ್ಲಾಧಿಕಾರಿ, ಚಾರಣಿಗರ ರಕ್ಷಣೆಗಾಗಿ ಭಾರತೀಯ ರಕ್ಷಣಾ ಸಚಿವಾಲಯದ ಮಿಲಿಟರಿ ವ್ಯವಹಾರಗಳ ಇಲಾಖೆಗೆ (ಡಿಎಂಎ) ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT