ನವದೆಹಲಿ: ಪೂರ್ವ ಲಡಾಖ್ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಡೆಪ್ಸಾಂಗ್ ಪ್ರದೇಶದಲ್ಲಿ ಭಾರತೀಯ ಸೇನೆಯು ಸೋಮವಾರ ಯಶಸ್ವಿಯಾಗಿ ಗಸ್ತು ಕಾರ್ಯಾಚರಣೆ ನಡೆಸಿತು.

ಗಡಿ ಕುರಿತಂತೆ ಚೀನಾದೊಂದಿಗೆ ನಾಲ್ಕೂವರೆ ವರ್ಷಗಳ ಸಂಘರ್ಷದ ನಂತರ ಸೇನೆ ವಾಪಸ್ ಕರೆಯಿಸಿಕೊಳ್ಳುವ ಸಂಬಂಧ ಉಭಯ ದೇಶಗಳ ನಡುವೆ ಇತ್ತೀಚೆಗೆ ಒಪ್ಪಂದ ಆಗಿತ್ತು.

ಡೆಪ್ಸಾಂಗ್ ಹಾಗೂ ಡೆಮ್ಚೋಕ್ ಪ್ರದೇಶಗಳಲ್ಲಿ ಸೇನೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಗಸ್ತು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.

ಸೇನೆ ವಾಪಸ್ ಪ್ರಕ್ರಿಯೆ ಪೂರ್ಣಗೊಂಡ ಒಂದು ದಿನದ ಬಳಿಕ ಡೆಮ್ಚೋಕ್ ಪ್ರದೇಶದಲ್ಲಿ ಗಸ್ತು ಕಾರ್ಯ ಆರಂಭಗೊಂಡಿತ್ತು.

ಎಲ್ಎಸಿಯಲ್ಲಿ ಶಾಂತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಗದೊಂದು ಧನಾತ್ಮಕ ಹೆಜ್ಜೆ ಇರಿಸಲಾಗಿದೆ ಎಂದು ಸೇನೆ ಮೂಲಗಳು ತಿಳಿಸಿವೆ.

ರಷ್ಯಾದ ಕಜಾನ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಸೇನೆ ಹಿಂದಕ್ಕೆ ಪಡೆದು ಗಸ್ತು ಆರಂಭಿಸಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದರು. ಏಪ್ರಿಲ್ 2020ರ ಮುಂಚೆ ಇದ್ದ ಸಹಜ ಸ್ಥಿತಿಗೆ ಮರಳಿಸುವುದು ಇದರ ಉದ್ದೇಶವಾಗಿತ್ತು.

ಕಳೆದ ವಾರ ವಾಸ್ತವ ನಿಯಂತ್ರಣ ರೇಖೆಯ ವಿವಿಧ ಗಡಿ ಕೇಂದ್ರಗಳಲ್ಲಿ ಭಾರತ ಹಾಗೂ ಚೀನಾದ ಯೋಧರು ಸಿಹಿ ವಿನಿಮಯ ಮಾಡಿಕೊಂಡಿದ್ದರು.

ಜೂನ್ 2020ರಲ್ಲಿ ಗಾಲ್ವನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾದ ಸೈನಿಕರ ನಡುವೆ ದಶಕದಲ್ಲೇ ಅತ್ಯಂತ ಭೀಕರವಾದ ಸಂಘರ್ಷ ನಡೆದಿತ್ತು.
.ಪೂರ್ವ ಲಡಾಖ್ನಲ್ಲಿ ಭಾರತದಿಂದ ಗಸ್ತು ತಿರುಗುವ ಕಾರ್ಯ ಆರಂಭ: ಸೇನಾ ಮೂಲಗಳು.ಲಡಾಖ್: ಸೇನೆ ವಾಪಸಾತಿ ಪೂರ್ಣ, ಒಪ್ಪಂದ ಜಾರಿ ಯಶಸ್ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.