ಛತ್ರಪತಿ ಸಂಭಾಜಿನಗರ: ಬಿಜೆಪಿಯೊಂದಿಗೆ ಸತತ ಮೂವತ್ತು ವರ್ಷ ಮೈತ್ರಿ ಸಾಧಿಸಿದ್ದಾಗಲೂ ಶಿವಸೇನೆ ಪಕ್ಷವು ತನ್ನ ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. ಕಾಂಗ್ರೆಸ್ ಜೊತೆಗಿನ ಸದ್ಯದ ಮೈತ್ರಿಯಿಂದಲೂ ಪಕ್ಷದ ಅಸ್ತಿತ್ವ, ಅಸ್ಮಿತೆ ಬದಲಾಗದು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಸ್ಪಷ್ಟಪಡಿಸಿದರು.

ಹಿಂಗೋಲಿಯಲ್ಲಿ ‘ಮಹಾ ವಿಕಾಸ ಆಘಾಡಿ’ ಅಭ್ಯರ್ಥಿಗಳ ಪರ ರ್ಯಾಲಿಯಲ್ಲಿ ಅವರು ಮಾತನಾಡಿದರು.

ಶಿವಸೇನೆ (ಉದ್ಧವ್ ಬಣ) ಕಾಂಗ್ರೆಸ್ನ ಇನ್ನೊಂದು ರೂಪ ಎಂಬ ಬಿಜೆಪಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಪಕ್ಷವು ಹಲವು ವರ್ಷಗಳ ಕಾಲ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಅದರ ಅಸ್ಮಿತೆ, ಅಸ್ತಿತ್ವವನ್ನು ಬಿಟ್ಟುಕೊಟ್ಟಿರಲಿಲ್ಲ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಜನರ ಬಳಿ ‘ಶಿವಸೇನೆಯು (ಉದ್ಧವ್ ಬಣ) ಬಾಳಾ ಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಅನಾಥ ಮಾಡಿದೆ’ ಎಂದು ಹೇಳುತ್ತಾರೆ. ಆದರೆ ನಾನು ಸಿದ್ಧಾಂತವನ್ನು ಬಿಟ್ಟಿಲ್ಲ, ಬಿಜೆಪಿಯ ಸಖ್ಯವನ್ನು ಮಾತ್ರ ತೊರೆದಿದ್ದೇನೆ. ಬಿಜೆಪಿಯು ಬಾಳಾ ಠಾಕ್ರೆ ಅವರ ಸಿದ್ಧಾಂತ ಅಲ್ಲ’ ಎಂದು ಹೇಳಿದರು.
.ಆಳ–ಅಗಲ | Assembly Elections: ಮಹಾ ‘ಹಣಾಹಣಿ’.'ಮಹಾ' ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್ನಿಂದ ₹ 700 ಕೋಟಿ ವಸೂಲಿ: ಮೋದಿ ಆರೋಪ.
ಬಿಜೆಪಿಯೊಂದಿಗೆ 25–30 ವರ್ಷ ಇದ್ದಾಗಲೂ ಶಿವಸೇನೆ ಬಿಜೆಪಿಯಾಗಿ ಪರಿವರ್ತನೆ ಹೊಂದಿಲ್ಲ ಎಂದಾದರೆ ಕಾಂಗ್ರೆಸ್ ಜೊತೆ ಸೇರಿದಾಗಲೂ ಅದು ಪರಿವರ್ತನೆಯಾಗುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.