ನೈರೊಬಿ: ಅಮೆರಿಕದ ಪ್ರಥಮ ಮಹಿಳೆ ಹಾಗೂ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಅವರು ಐದು ದಿನಗಳ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ.

ಅವರ ಭೇಟಿಯ ಭಾಗವಾಗಿ ಕೀನ್ಯಾದಲ್ಲಿ ಎರಡು ದಿನ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಈ ವೇಳೆ ಅಲ್ಲಿನ ಯುವ ಸಬಲೀಕರಣ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕರೊಂದಿಗೆ ಸುರಕ್ಷಿತ ಲೈಂಗಿಕತೆ, ಸುರಕ್ಷಿತ ಡೇಟಿಂಗ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಕೀನ್ಯಾದ ಯುವಕರು ಸುರಕ್ಷಿತ ಲೈಂಗಿಕತೆ ಬಗ್ಗೆ ತಾವು ಜಾಗೃತರಾಗಿದ್ದು ಇತರರನ್ನು ಜಾಗೃತಗೊಳಿಸುತ್ತಿದ್ದಾರೆ. ಹೀಗಾಗಿ ನನಗೆ ಕೀನ್ಯಾ ಯುವಕರನ್ನು ಕಂಡರೆ ಇಷ್ಟ ಎಂದು ಹೇಳಿದ್ದಾರೆ.

ಸದ್ಯ ಅಸುರಕ್ಷಿತ ಲೈಂಗಿಕತೆ ಎನ್ನುವುದು ಚಿಂತೆ ತರುವಂತಹ ವಿಷಯ. ಜನ ನಿಜವಾಗಿಯೂ ಇದರ ಬಗ್ಗೆ ಮಾತನಾಡಬೇಕಿದೆ. ನನ್ನ ಜೇಬಿನಲ್ಲಿ ಕಾಂಡೋಮ್ ಇದೆ ಎಂದು ಹೇಳಿದರೆ ನೀವು ಏನು ಹೇಳುತ್ತಿರಿ? ಆಶ್ಚರ್ಯವಾಗುವಂತ ಸಂಗತಿಯಲ್ಲ. ಇದು ಸಹಜ ಎನ್ನುವಂತ ಸಂಗತಿ ಯುವಕರಲ್ಲಿ ಬರಬೇಕು ಎಂದು ಜಿಲ್ ಬೈಡನ್ ಒತ್ತಿ ಹೇಳಿದರು.

ಜಿಲ್ ಬೈಡನ್ ಅವರು ಕೀನ್ಯಾ ಹಾಗೂ ನಮಿಬೀಯಾಕ್ಕೆ ಐದು ದಿನಗಳ ಪ್ರವಾಸ ಕೈಗೊಂಡಿದ್ದು ಎಚ್‌ಐವಿ ಏಡ್ಸ್‌ಗೆ ತುತ್ತಾದವರಿಗೆ ತಮ್ಮ ಎನ್‌ಜಿಒದಿಂದ ನೀಡಲಾದ ಉದ್ಯೋಗಗಳನ್ನು ಅವರು ಪರಿಶೀಲಿಸಲಿದ್ದಾರೆ.

ಕುಮಾರಸ್ವಾಮಿ ಮೊದಲು ಕುಟುಂಬ ನಿಭಾಯಿಸಲಿ, ಆಮೇಲೆ ರಾಜ್ಯ ಆಳಲು ಬರಲಿ: ಸಚಿವ ಜೋಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.