ಕೀವ್: ರಷ್ಯಾ–ಉಕ್ರೇನ್ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಂದಿರುವ ಯೋಜನೆಯ ವಿವರಗಳ ಬಗ್ಗೆ ತಿಳಿದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆಯುತ್ತಿರುವ 'ಯುರೋಪಿಯನ್ ರಾಜಕೀಯ ಸಮುದಾಯ ಸಮಾವೇಶ'ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಝೆಲೆನ್ಸ್ಕಿ, ಟ್ರಂಪ್ ಅವರು ಯುದ್ಧವನ್ನು ಸಾಧ್ಯವಾದಷ್ಟು ಬೇಗನೆ ಕೊನೆಗೊಳಿಸುವ ವಿಶ್ವಾಸವಿದೆ. ಆದರೆ, ಅವರು ತಮ್ಮ ಯೋಜನೆ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ.

ಯುದ್ಧ ಕೊನೆಗೊಳಿಸುವ ಪ್ರಕ್ರಿಯೆ ಕೇವಲ ಕ್ಷಿಪ್ರವಾಗಿಯಷ್ಟೇ ಇದ್ದರೆ ಉಕ್ರೇನ್ಗೆ ನಷ್ಟವೂ ಉಂಟಾಗಬಹುದು. ಆದರೆ, ಯಾವ ರೀತಿಯಲ್ಲಿ ಪ್ರಕ್ರಿಯೆ ಸಾಗಲಿದೆ ಎಂಬುದು ಇನ್ನೂ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ.

ರಷ್ಯಾ ಒಂದು ತಿಂಗಳಿನಿಂದ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಉತ್ತರ ಕೊರಿಯಾ ಸಹ ತನ್ನ ಪಡೆಗಳನ್ನು ರಷ್ಯಾದ ಕರ್ಸ್ಕ್ ಪ್ರಾಂತ್ಯದಲ್ಲಿ ನಿಯೋಜಿಸಿರುವುದು ಉಕ್ರೇನ್ನ ಆತಂಕವನ್ನು ಹೆಚ್ಚಿಸಿದೆ. ಇಂತಹ ಹೊತ್ತಿನಲ್ಲೇ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಟ್ರಂಪ್ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ, ಅಮೆರಿಕವು ಉಕ್ರೇನ್ಗೆ ನೀಡುತ್ತಿರುವ ಭಾರಿ ಶಸ್ತ್ರಾಸ್ತ್ರ ಹಾಗೂ ಹಣಕಾಸಿನ ನೆರವಿನ ಬಗ್ಗೆ ಟೀಕಿಸಿದ್ದರು. ಹಾಗೆಯೇ, ಅಧಿಕಾರಕ್ಕೇರಿದರೆ ಯುದ್ಧವನ್ನು ಸಾಧ್ಯವಾದಷ್ಟು ಬೇಗನೆ ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದರು.
.Russia–Ukraine War: ಶಾಂತಿ ನೆಲೆಸಬೇಕೆಂದರೆ ಉಕ್ರೇನ್ ತಟಸ್ಥವಾಗಿರಬೇಕು –ಪುಟಿನ್.ಟ್ರಂಪ್ಗೆ ಮತ್ತೆ ಅಮೆರಿಕ ಪಟ್ಟ; ಉಪಾಧ್ಯಕ್ಷೆ ಹ್ಯಾರಿಸ್ಗೆ ನಿರಾಸೆ.
ಅಮೆರಿಕವು ಉಕ್ರೇನ್ನ ಮಿತ್ರ ರಾಷ್ಟ್ರವಾಗಿದೆ. ಟ್ರಂಪ್ ವಿಜಯವನ್ನು ಶ್ಲಾಘಿಸಿ ಹೇಳಿಕೆ ಬಿಡುಗಡೆ ಮಾಡಿದ್ದ ಝೆಲೆನ್ಸ್ಕಿ, ನೂತನ ಅಧ್ಯಕ್ಷರೊಂದಿಗೆ ಬುಧವಾರ ತಡರಾತ್ರಿ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಉಕ್ರೇನ್ ಹಾಗೂ ರಷ್ಯಾ ನಡುವೆ ಎರಡೂವರೆ ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಉಕ್ರೇನ್ನ ಐದನೇ ಒಂದರಷ್ಟು ಪ್ರದೇಶಗಳನ್ನು ರಷ್ಯಾ ನಿಯಂತ್ರಣಕ್ಕೆ ಪಡೆದಿದೆ.

ಉಕ್ರೇನ್ ಜೊತೆಗಿನ ಬಿಕ್ಕಟ್ಟನ್ನು ಸುಗಮವಾಗಿ ಅಂತ್ಯಗೊಳಿಸುವ ಯಾವುದೇ ಆಲೋಚನೆಗಳ ಬಗ್ಗೆ ಟ್ರಂಪ್ ಅವರೊಂದಿಗೆ ಚರ್ಚಿಸಲು ಸಿದ್ಧವಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಝೆಲೆನ್ಸ್ಕಿ, ನಾವು ಯಾವುದೇ ನಿರ್ಧಾರ ಕೈಗೊಳ್ಳಲು ಸೂಕ್ತ ತಯಾರಿ ನಡೆಸಬೇಕು. ಯುದ್ಧವು ನ್ಯಾಯಯುತವಾಗಿ ಅಂತ್ಯಗೊಳ್ಳುವುದನ್ನು ಬಯಸುತ್ತೇವೆ ಎಂದಿದ್ದಾರೆ.

ಉಕ್ರೇನ್ಗೆ ಸೂಕ್ತ ಭದ್ರತಾ ಖಾತ್ರಿಯನ್ನು ಒದಗಿಸದೆ, ಕದನ ವಿರಾಮ ಘೋಷಿಸುವ ಆಲೋಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.