ಬಳ್ಳಾರಿ: ‘ವಿಜಯಪುರ ಜಿಲ್ಲೆಯ ಪಟಗಾನೂರು ಗ್ರಾಮದಲ್ಲಿ ಇರುವ ಚಾಲುಕ್ಯರ ಕಾಲದ ದೇವಾಲಯದ ಜಾಗಕ್ಕೂ ವಕ್ಫ್ ಆಸ್ತಿ ಎಂದು ನೋಟಿಸ್ ಕೊಡಲಾಗಿದೆ. ಈ ದೇಶದಲ್ಲಿ ಚಾಲುಕ್ಯರು ಮೊದಲೋ, ವಕ್ಫ್ ಕಾಯ್ದೆ ಮೊದಲೋ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಟಗಾನೂರು ಗ್ರಾಮದ ಸರ್ವೆ ನಂಬರ್ 20ರಲ್ಲಿ ಇಡೀ ಗ್ರಾಮ ಮತ್ತು ಚಾಲುಕ್ಯರ ಕಾಲದ ಸೋಮೇಶ್ವರ ದೇಗುಲವೂ ಇದೆ. ಈಗ ನೋಟಿಸ್ ನೋಡಿ ಇಡೀ ಗ್ರಾಮವೇ ಆತಂಕಕ್ಕೀಡಾಗಿದೆ. ಇನ್ನೊಂದೆಡೆ ಸಿಂದಗಿಯ ವಿರಕ್ತ ಮಠದ ಜಾಗವನ್ನೂ ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ಹೀಗೇ ವಿಜಯಪುರ ಜಿಲ್ಲೆಯ 14,100 ಎಕರೆ ಪ್ರದೇಶವನ್ನು ವಕ್ಫ್ ಆಸ್ತಿ ಎಂದು ನೋಟಿಸ್ ಕೊಡಲಾಗುತ್ತಿದೆ. ವಕ್ಫ್ಗೆ ಈ ಆಸ್ತಿ ಬಂದಿದ್ದಾದರೂ ಹೇಗೆ’ ಎಂದು ಅವರ ಸರ್ಕಾರನ್ನು ಪ್ರಶ್ನಿಸಿದರು.

‘ವಕ್ಫ್ಗೆ ಆಸ್ತಿಯೊಂದು ಹೇಗೆ ಬಂತು ಎಂಬುದನ್ನು ವಕ್ಫ್ ಸಾಬೀತು ಮಾಡಬೇಕು. ಇಲ್ಲವಾದರೆ, ಮೂಲ ಮಾಲೀಕರಿಗೆ ಹಿಂದಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ಆದೇಶವೇ ಇಲ್ಲಿ ಕಾನೂನಾಗಬೇಕು’ ಎಂದು ಹೇಳಿದರು.

‘ನಮ್ಮ ರೈತರ ಆಸ್ತಿಗೆ ಯಾರೂ ಕನ್ನ ಹಾಕಬಾರದು. ಅವರ ಪಿತ್ರಾರ್ಜಿತ ಆಸ್ತಿ ಅವರ ಭೋಗದಲ್ಲಿರಬೇಕು. ಇಲ್ಲವಾದರೆ ನಾವು ಹೋರಾಟಕ್ಕಿಳಿಯುತ್ತೇವೆ. ಪಹಣಿಯಲ್ಲಿ ವಕ್ಫ್ ಎಂದು ಬಂದಿರುವುದು ಮುಗ್ದ ರೈತರಿಗೆ ಗೊತ್ತಾಗಿಲ್ಲ. ರಾಜ್ಯದ ಎಲ್ಲ ರೈತರು ಪಹಣಿ ಪರಿಶೀಲಿಸಿಕೊಳ್ಳಬೇಕು’ ಎಂದು ಅವರು ಇದೇ ವೇಳೆ ಸಲಹೆ ನೀಡಿದರು.

‘ಸಿದ್ದರಾಮಯ್ಯ ಅವರು ಹೇಳಿದ ಮಾತ್ರಕ್ಕೆ ನೋಟಿಸ್ಗಳು ರದ್ದಾಗುವುದಿಲ್ಲ. ಏಕಾಏಕಿ ಇನ್ನೊಬ್ಬರ ಜಮೀನಿನ ಮೇಲೆ ಅದಿಪತ್ಯ ಸಾಧಿಸಲು ಹೊರಡುತ್ತಿರುವ ವಕ್ಫ್ ತನಗೆ ಆ ಆಸ್ತಿ ಹೇಗೆ ಬಂದಿದೆ ಎಂಬುದನ್ನು ತಿಳಿಸಬೇಕು’ ಎಂದು ಅವರು ಆಗ್ರಹಿಸಿದರು.

‘ನೆಹರೂ ಆಡಳಿತದಲ್ಲಿ ವಕ್ಫ್ ಕಾನೂನು ಬಂತು. ಆಗ 1.20 ಲಕ್ಷ ಎಕರೆ ಇದ್ದ ವಕ್ಫ್ ಆಸ್ತಿ, ಈಗ 9 ಲಕ್ಷ ಎಕರೆಗೆ ಏರಿದೆ. ಇದು ಎಲ್ಲಿಂದ ಬಂತು. ಯಾರಾದರು ಧಾನ ಕೊಟ್ಟರೋ, ಖರೀದಿ ಮಾಡಿದರೋ, ಪಿತ್ರಾರ್ಜಿತವೋ. ವಕ್ಫ್ ಇಲಾಖೆ ಇದಕ್ಕೆ ಉತ್ತರಿಸಬೇಕು’ ಎಂದರು.

ವಿಧಾನಪರಿಷತ್ ಸದಸ್ಯ ವೈ.ಎಂ ಸತೀಶ್ ಮಾತನಾಡಿ, ಜಿಲ್ಲೆಯ ಮೋಕಾ ಹೋಬಳಿಯ ಬೊಮ್ಮನಾಳು ಗ್ರಾಮದ 5–6 ಕುಟುಂಬಗಳಿಗೆ ಅವರ ಜಮೀನು ವಕ್ಫ್ ಆಸ್ತಿ ಎಂದು ನೋಟಿಸ್ ಬಂದಿದೆ. ಮೋಕಾ ಹೋಬಳಿಯ ಹಲವು ಹಳ್ಳಿಗಳಿಗೂ ನೋಟಿಸ್ ಕೊಡಲಾಗಿದೆ’ ಎಂದು ಹೇಳಿದರು.

ಒಳ ಮೀಸಲಾತಿ: ಕಾಂಗ್ರೆಸ್ ಮೋಸದಾಟ

‘ನಮಗೆ ಅಧಿಕಾರ ಕೊಟ್ಟರೆ ಒಳಮೀಸಲಾತಿ ನೀಡುವುದದಾಗಿ, ಸದಾಶಿವ ಆಯೋಗದ ವರದಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದ ಸಿದ್ದರಾಮಯ್ಯ ಈಗ ಒಳಮೀಸಲಾತಿ ಜಾರಿಗೆ ಆಯೋಗ ರಚಿಸಿದ್ದಾರೆ. ಆಯೋಗ ಮೂರು ತಿಂಗಳ ಅವಧಿಯಲ್ಲಿ ಯಾವ ಅಂಕಿ ಅಂಶ ಸಂಗ್ರಹಿಸಲು ಸಾಧ್ಯ’ ಎಂದು ಸಂಸದ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದರು.

‘ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮೋಸದಾಟ ಆಡುತ್ತಿದೆ. ಸುಪ್ರೀಂ ಕೋರ್ಟ್ ಆದೇಶ ಯಥಾವತ್ ಜಾರಿಗೆ ಮುಂದಾಗಬೇಕು. ಇಲ್ಲದಿದ್ದರೆ ಜನರನ್ನು ಎತ್ತಿಕಟ್ಟುತ್ತೇವೆ, ಹೋರಾಟ ಮಾಡುತ್ತೇವೆ’ ಎಂದರು.

‘ದಲಿತರು ವಿದ್ಯಾವಂತರಾಗಬಾರದು, ಮೇಲೆ ಬರಬಾರದು, ಕೊಳೆಗೇರಿಗಳಲ್ಲಿ, ತಾಂಡಾಗಳಲ್ಲಿ ಇರಬೇಕು. ಅವರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಬೇಕು ಎಂಬುದೇ ಸಿದ್ದರಾಮಯ್ಯ ಇರಾದೆ‘ ಎಂದು ಅವರು ಆರೋಪಿಸಿದರು.

‘ಕೋರ್ಟ್ ಆದೇಶ ಪಾಲಿಸಿ ಎಂದು ಖರ್ಗೆಯವರಾದರೂ ಸಿದ್ದರಾಮಯ್ಯ ಅವರಿಗೆ ಹೇಳಬೇಕಿತ್ತು. ದಲಿತರು ವೋಟ್ ಬ್ಯಾಂಕ್ ಆಗಬೇಕು ಎಂಬುದೇ ಅವರಿಗೂ ಬೇಕಾದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
.ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಹೀನ ರಾಜಕಾರಣ: ಎಂ.ಬಿ. ಪಾಟೀಲ ಆರೋಪ.ಸಿಎಂ, ಜಮೀರ್ ಸೂಚನೆಯಂತೆ ವಕ್ಫ್ ಹೆಸರು ಉಲ್ಲೇಖ –ಕಾಗೇರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.