ಹಾನಗಲ್: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ರೈತರು ಬಿತ್ತನೆ ಕಾರ್ಯಕ್ಕಾಗಿ ಭೂಮಿ ಹದಗೊಳಿಸುವುದರಲ್ಲಿ ತೊಡಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ತಗ್ಗು ಪ್ರದೇಶದ ಕೆಲವೊಂದು ಕೃಷಿ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದೆ.

ಮೇ ತಿಂಗಳ ವಾಡಿಕೆ ಮಳೆ 74 ಮಿ.ಮೀ. ಆದರೆ ಮೇ 22 ರ ವರೆಗೆ 102 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ 28 ಮಿ.ಮೀ ಮಳೆ ಅಧಿಕವಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ವರದಿಗಳು ಹವಾಮಾನ ಇಲಾಖೆಯಿಂದ ಬಂದಿವೆ.

ತಾಲ್ಲೂಕಿನಲ್ಲಿ ಒಟ್ಟು 47,663 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಪ್ರಮುಖ ಬೆಳೆಗಳಾದ ಭತ್ತ 14,350 ಹೆಕ್ಟೇರ್, ಗೋವಿನಜೋಳ 24,103 ಹೆಕ್ಟೇರ್, ಶೇಂಗಾ 888 ಹೆಕ್ಟೇರ್, ಸೋಯಾಬಿನ್ 2,403 ಹೆಕ್ಟೇರ್, ಹತ್ತಿ 3,100 ಹೆಕ್ಟೇರ್, ಕಬ್ಬು 2,700 ಹೆಕ್ಟೇರ್ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.

ಬಿತ್ತನೆಗೆ ಮಳೆ ಪೂರಕವಾಗಿ ಸುರಿಯುತ್ತಿರುವ ಕಾರಣ ಬಿತ್ತನೆ ಬೀಜಗಳ ಖರೀದಿಯತ್ತ ರೈತರು ಆಸಕ್ತಿ ವಹಿಸುತ್ತಿದ್ದಾರೆ. ಕೃಷಿ ಇಲಾಖೆಯಿಂದ ತಾಲ್ಲೂಕಿನ 9 ಕೇಂದ್ರಗಳಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆ ಗುರುವಾರದಿಂದ ಆರಂಭಗೊಂಡಿದೆ.

‘ಹಾನಗಲ್, ಚಿಕ್ಕಾಂಶಿಹೊಸೂರ, ಅಕ್ಕಿಆಲೂರ, ತಿಳವಳ್ಳಿ, ಆಡೂರ, ಬಮ್ಮನಹಳ್ಳಿ, ಬೆಳಗಾಲಪೇಟೆ, ಮಾರನಬೀಡ, ವರ್ದಿ ಗ್ರಾಮಗಳಲ್ಲಿ ಬಿತ್ತನೆ ಬೀಜ ವಿತರಣೆ ಕೇಂದ್ರಗಳನ್ನು ಕೃಷಿ ಇಲಾಖೆ ತೆರೆದಿದೆ. ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್ ಸೇರಿ ಒಟ್ಟು 5,321 ಟನ್ ರಸಗೊಬ್ಬರ ದಾಸ್ತಾನು ಇದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಮೋಹನಕುಮಾರ ತಿಳಿಸಿದ್ದಾರೆ.

‘ಬಿತ್ತನೆ ಸಮಯದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ, ಡಿಎಪಿ ರಸಗೊಬ್ಬರ ಉಪಯೋಗಿಸುವ ಬದಲಾಗಿ ಕಾಂಪ್ಲೆಕ್ಸ್ ಗೊಬ್ಬರ ಬಳಕೆಯಿಂದ ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ, ಸಲ್ಫರ್ ಅಂಶಗಳನ್ನು ಬೆಳೆಗಳಿಗೆ ಒದಗಿಸಬಹುದು’ ಎಂದು ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ತಿಳಿಸಿದ್ದಾರೆ.

ಬಿತ್ತನೆ ಬೀಜ ವಿತರಣೆಗೆ ಚಾಲನೆ

ಹಾನಗಲ್: ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಗುರುವಾರ ಕೃಷಿ ಇಲಾಖೆಯ ಸಹಾಯಧನದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಯಿತು. ಸಹಾಯಕ ಕೃಷಿ ನಿರ್ದೇಶಕ ಕೆ.ಮೋಹನಕುಮಾರ ಕೃಷಿ ಅಧಿಕಾರಿಗಳಾದ ಸಂಗಮೇಶ ಹಕ್ಲಪ್ಪನವರ ರಾಮನಗೌಡ ಪಾಟೀಲ ವಿಜಯ ಅಪ್ಪಾಜಿ ರಿಯಾಜ್ ಮಾಸನಕಟ್ಟಿ ಮೌನೇಶ ಚನ್ನಾಪೂರ ಮತ್ತು ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.