ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆಯಲ್ಲಿ ಫಕೀರನಂತೆ ಹೋರಾಡಿದೆ, ಅದು ಸಂಪೂರ್ಣ ಗೆಲುವೇ ಅಲ್ಲ: ಸುಳೆ

Published : 28 ಸೆಪ್ಟೆಂಬರ್ 2024, 2:10 IST
Last Updated : 28 ಸೆಪ್ಟೆಂಬರ್ 2024, 2:10 IST
ಫಾಲೋ ಮಾಡಿ
Comments

ಮುಂಬೈ: 2024ರ ಲೋಕಸಭೆ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಿಂದ ಫಕೀರನಂತೆ (ತಪಸ್ವಿಯಂತೆ) ಕಣಕ್ಕಿಳಿದಿದ್ದೆ. ಅಲ್ಲಿ ದೊರೆತ ಗೆಲುವು ನಿಜವಾಗಿಯೂ ಸಂಪೂರ್ಣ ಗೆಲುವಲ್ಲ ಎಂದು ಶರದ್‌ ಪವಾರ್‌ ಬಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ–ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಶುಕ್ರವಾರ ಹೇಳಿದ್ದಾರೆ.

ಅವರು ಬಾರಾಮತಿಯಲ್ಲಿ 2009ರಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ.

ಸಿಎನ್‌ಎನ್‌ ನ್ಯೂಸ್‌–18 ವಾಹಿನಿಯೊಂದಿಗೆ ಮಾತನಾಡಿರುವ ಸುಳೆ, 'ಚುನಾವಣೆಯಲ್ಲಿ ತಪಸ್ವಿಯಂತೆ ಹೋರಾಡಿದ್ದೆ' ಎಂದು ಪ್ರತಿಪಾದಿಸಿದ್ದಾರೆ.

ಎನ್‌ಸಿಪಿ–ಎಸ್‌ಪಿಯ ಕಾರ್ಯಾಧ್ಯಕ್ಷೆಯೂ ಆಗಿರುವ ಸುಳೆ ವಿರುದ್ಧ ಬಾರಾಮತಿ ಕ್ಷೇತ್ರದಲ್ಲಿ ಅವರ ಅತ್ತಿಗೆಯೇ (ಅಜಿತ್‌ ಪವಾರ್‌ ಪತ್ನಿ) ಕಣಕ್ಕಿಳಿದಿದ್ದರು. ಈ ಕುರಿತು ಮಾತನಾಡಿರುವ ಸುಳೆ, 'ಗೆಲ್ಲುತ್ತೇನೆ ಎಂಬುದು ನನಗೇ ಸಂಪೂರ್ಣ ಖಾತ್ರಿ ಇರಲಿಲ್ಲ. ಏಕೆಂದರೆ ಹಲವು ವಿರೋಧಾಭಾಸಗಳನ್ನು ಎದುರಿಸುತ್ತಿದ್ದೆ' ಎಂದಿದ್ದಾರೆ.

ಮುಂದುವರಿದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆಗೆ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದು ಬಹುಶಃ ಅಸಂಭವ. ಚುನಾವಣೆ ಬಳಿಕ ಸೂಕ್ತ ಅಭ್ಯರ್ಥಿಯ ಆಯ್ಕೆ ಆಗಲಿದೆ ಎಂದು ತಿಳಿಸಿದ್ದಾರೆ.

ಎನ್‌ಸಿಪಿ–ಎಸ್‌ಪಿಯು ಎಂವಿಎ ಮೈತ್ರಿಕೂಟದಲ್ಲಿರುವ ಪ್ರಮುಖ ಪಕ್ಷವಾಗಿದೆ. ಕಾಂಗ್ರೆಸ್‌ ಹಾಗೂ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಪಕ್ಷಗಳೂ ಮೈತ್ರಿಕೂಟದಲ್ಲಿವೆ.

ಪಕ್ಷ ವಿಭಜನೆ ಕುರಿತಂತೆ, ತಮ್ಮಿಂದ ಪಕ್ಷ ಮತ್ತು ಅದರ ಚಿಹ್ನೆಯನ್ನು ಕಸಿದುಕೊಳ್ಳಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT