ನವದೆಹಲಿ: ಅಮೆರಿಕದ ನೂತನ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಭಾರತ ಭೇಟಿ ವೇಳೆಯಲ್ಲಿ ದೇಶದಲ್ಲಿನ ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಪ್ರಸ್ತಾಪವಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಕಾರ್ಯತಂತ್ರದ ವ್ಯವಹಾರಗಳ ಹೊರತಾಗಿ ಮಾನವ ಹಕ್ಕುಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಅಮೆರಿಕ ಮೂಲದ ಫ್ರೀಡಂ ಹೌಸ್ ತನ್ನ ಇತ್ತೀಚಿನ 'ಫ್ರೀಡಂ ಇನ್ ದಿ ವರ್ಲ್ಡ್ 2021' ವರದಿಯಲ್ಲಿ ಭಾರತಲ್ಲಿ ಪ್ರಜಾತಂತ್ರ ವ್ಯವಸ್ಥೆ ಕುಸಿಯುತ್ತಿದ್ದು, 'ಮುಕ್ತ ದೇಶ'ದಿಂದ 'ಭಾಗಶಃ ಮುಕ್ತ ದೇಶ' ದರ್ಜೆಗೆ ಇಳಿಸಿತ್ತು. ಆದರೆ ಅಮೆರಿಕ ಸರ್ಕಾರ ಆರ್ಥಿಕ ನೆರವು ಪಡೆಯುತ್ತಿರುವ ಫ್ರೀಡಂ ಹೌಸ್ ವರದಿಯನ್ನು ಭಾರತವು ತಳ್ಳಿ ಹಾಕಿತ್ತು.

ಇದನ್ನೂ ಓದಿ:ಭಾರತಕ್ಕೆ ಆಸ್ಟಿನ್ ಭೇಟಿ; ಅಮೆರಿಕ ಸಂಸದರ ಸ್ವಾಗತ

ಮೂಲಗಳ ಪ್ರಕಾರ, ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಮೇಲೆ ಚರ್ಚೆಯು ಕೇಂದ್ರಿಕರಿಸಿತ್ತು. ಇತ್ತೀಚಿನ ಪೂರ್ವ ಏಷ್ಯಾ ಭೇಟಿಯ ಬಗ್ಗೆ ಅಮೆರಿಕ ವಿವರಣೆ ನೀಡಿತ್ತು. ಭಾರತವು ಭದ್ರತಾ ಸವಾಲುಗಳು ಮತ್ತು ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿವೆ. ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಜಾಗತಿಕ ಸನ್ನಿವೇಶಗಳ ಬಗ್ಗೆಯೂ ಮಾತುಕತೆ ನಡೆಸಲಾಗಿದೆ.

ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಆಸ್ಟಿನ್ ಶನಿವಾರದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರದ ಬಗ್ಗೆ ಚರ್ಚೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.