ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Union Budget Live: ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಿಕ್ಕಿದೆ– ನಿತೀಶ್

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡಿಸಿದರು.
Published : 23 ಜುಲೈ 2024, 4:53 IST
Last Updated : 23 ಜುಲೈ 2024, 11:39 IST
ಫಾಲೋ ಮಾಡಿ
04:5323 Jul 2024

ಕೇಂದ್ರ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಿದರು. ಅವರು ಸತತವಾಗಿ ಮಂಡಿಸಿದ ಏಳನೇ ಬಜೆಟ್‌ ಇದಾಗಿತ್ತು. ಬಜೆಟ್ ಮಂಡನೆಯ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ನೀಡಲಾಗಿತ್ತು.

04:5623 Jul 2024

ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಹಿ–ಖಾತಾ(ಕೆಂಪು ವಸ್ತ್ರದಲ್ಲಿ ಸುತ್ತಿದ ದಾಖಲೆ) ಹಿಡಿದು ಹಣಕಾಸು ಸಚಿವಾಲಯದಿಂದ ಸಂಸತ್‌ ಭವನದತ್ತ ತೆರಳಿದ್ದಾರೆ.

04:5623 Jul 2024

ಬಿಳಿ ಬಣ್ಣದ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್‌ ಕಂದು ನೇರಳೆ ಬಣ್ಣದ ಅಂಚು ಹೊಂದಿರುವ ಬಿಳಿ ಸೀರೆ ಉಟ್ಟು ಬಂದಿರುವ ಅವರು ಸಂಸತ್ ಭವನದತ್ತ ತೆರಳಿದ್ದಾರೆ. ತಮ್ಮ ಐದನೇ ಬಜೆಟ್‌ ಮಂಡನೆ ವೇಳೆ ಧಾರವಾಡದ ಜಿಲ್ಲೆಯ ನವಲಗುಂದದ ಕಸೂತಿ ಕಲೆ ಇರುವ ಸೀರೆ ಉಟ್ಟಿದ್ದರು.

04:5823 Jul 2024

2019ರ ಬಜೆಟ್ ಮಂಡನೆ ವೇಳೆ ಗೋಲ್ಡನ್ ಬಾರ್ಡರ್ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯಟ್ಟು ಮಿಂಚಿದ್ದರು. 2020ರಲ್ಲಿ ಹಳದಿ ಹಾಗೂ ನೀಲಿ ಮಿಶ್ರಿತ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. 2021ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆಯಲ್ಲಿ ಮತ್ತು 2022ರಲ್ಲಿ ಕಂದು ಬಣ್ಣದ ಕೈಮಗ್ಗ ಸೀರೆ ಧರಿಸಿದ್ದರು. 2023ರ ಮಧ್ಯಂತರ ಬಜೆಟ್ ವೇಳೆ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.

05:0023 Jul 2024

ಬಜೆಟ್ ಬಗ್ಗೆ ಕಾಂಗ್ರೆಸ್ ಸಂಸದ ಗೌರವ್ ಗೋಗಯ್ ಅವರು ಕಿಡಿಕಾರಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಆಪ್ತರಾಗಿರುವ ಕೋಟ್ಯದಿಪತಿಗಳಿಗೆ  ಸಹಾಯ ಮಾಡಲು ಈ ಬಜೆಟ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

05:0423 Jul 2024

ಬಜೆಟ್ ಪ್ರತಿಗಾಗಿ ಸಾರ್ವಜನಿಕರು Union Budget Mobile App ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸಬಹುದು.

05:0523 Jul 2024

ಈ ಬಜೆಟ್‌ನಲ್ಲಿ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ತೀವ್ರ ನಿರೀಕ್ಷೆ ಹೊಂದಲಾಗಿದೆ.

05:0723 Jul 2024
05:1023 Jul 2024

2024-25ರ ಪೂರ್ಣ ಬಜೆಟ್ ಮಂಡಿಸುವ ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಸಂಪ್ರದಾಯದ ಪ್ರಕಾರ, ಹಣಕಾಸು ಸಚಿವರು ಸಂಸತ್ತಿಗೆ ತೆರಳುವ ಮೊದಲು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದರು. ಕೇಂದ್ರ ಬಜೆಟ್ ಮಂಡಿಸಲು ಸಂಸತ್ತಿಗೆ ತೆರಳುವ ಮುನ್ನ ಸೀತಾರಾಮನ್ ಅವರಿಗೆ ಮುರ್ಮು ಅವರು 'ದಹಿ-ಚಿನಿ' (ಮೊಸರು-ಸಕ್ಕರೆ) ನೀಡಿದರು.

05:2123 Jul 2024

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದ್ದು ಮೋದಿ ಅವರು ಹೇಗೆ ಸಮತೋಲನ ಮಾಡಿದ್ದಾರೆ ಎಂಬುದರ ಬಗ್ಗೆ ದೇಶದ ಚಿತ್ತ ನೆಟ್ಟಿದೆ

ADVERTISEMENT
ADVERTISEMENT