ನವದೆಹಲಿ: ‘ಭಾರತದ ಡಿಜಿಟಲ್ ಆರ್ಥಿಕತೆಯು ವಾರ್ಷಿಕ ಶೇ 2.8ರ ದರದಲ್ಲಿ ಬೆಳವಣಿಗೆ ಕಾಣುತ್ತಿದ್ದು, 2027–28ನೇ ಸಾಲಿಗೆ 1 ಟ್ರಿಲಿಯನ್ ಅಮೆರಿಕನ್ ಡಾಲರ್ ತಲುಪಲಿದೆ’ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅಂದಾಜಿಸಿದ್ದಾರೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಅಧಿಕೃತ ನಿವಾಸದಲ್ಲಿ ಆಯೋಜಿಸಲಾಗಿದ್ದ ‘ವಿಶೇಷ ಸಂಪರ್ಕ ಅಭಿಯಾನ’ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು. ಇದರಲ್ಲಿ ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್ಅಪ್ ಹಾಗೂ ತಂತ್ರಜ್ಞಾನ ಕ್ಷೇತ್ರದ 300 ಉದ್ಯಮಿಗಳು ಹಾಗು ತಜ್ಞರು ಪಾಲ್ಗೊಂಡಿದ್ದದರು.

‘ಇಂಡಿಯಾ ಎಐ (ಕೃತಕ ಬುದ್ಧಿಮತ್ತೆ) ಯೋಜನೆ ಮೂಲಕ ಆರ್ಥಿಕತೆಯು ವಾರ್ಷಿಕ ₹10 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿಗೆ ನೆಗೆಯಲಿದೆ. ಈ ಮೊದಲು ಈ ಗುರಿಯು 2026–27ರಲ್ಲೇ ಮುಟ್ಟಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಕೋವಿಡ್–19ರಿಂದಾಗಿ ಒಂದು ವರ್ಷ ಮುಂದಕ್ಕೆ ಹೋಗಿದೆ’ ಎಂದು ತಿಳಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪರಿಣಾಮ ಭಾರತದಲ್ಲಿ ಡಿಜಿಟಲ್ ಆರ್ಥಿಕತೆ ವೃದ್ಧಿಯಾಗುತ್ತಿದೆ. 2015ರಲ್ಲಿ ಈ ಯೋಜನೆಗೆ ಅಡಿಪಾಯ ಹಾಕಲಾಗಿತ್ತು. ಇದರ ಪರಿಣಾಮವಾಗಿ ಜಗತ್ತಿನಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿರುವ ಡಿಜಿಟಿಲ್ ಆರ್ಥಿಕತೆ ಭಾರತದ್ದಾಗಿದೆ’ ಎಂದಿದ್ದಾರೆ.

₹1 ಲಕ್ಷ ಬೀಜ ನಿಧಿ

‘ಪ್ರಧಾನಮಂತ್ರಿ ಅವರು ಈಗಾಗಲೇ ₹1 ಲಕ್ಷ ಕೋಟಿ ಬೀಜನಿಧಿಯನ್ನು ಇದಕ್ಕಾಗಿ ಮಂಜೂರು ಮಾಡಿದ್ದಾರೆ. ಈ ಹಣವನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ಖರ್ಚು ಮಾಡಲಾಗುವುದು. ಆ ಮೂಲಕ ವಾರ್ಷಿಕ ₹20 ಸಾವಿರ ಕೋಟಿ ಆದಾಯ ತಂದುಕೊಡುವ ಕೃತಕ ಬುದ್ಧಿಮತ್ತೆ ಯೋಜನೆಗೆ ಖರ್ಚು ಮಾಡಲಾಗುವುದು’ ಎಂದಿದ್ದಾರೆ.

‘ಪ್ರಧಾನಮಂತ್ರಿ ಅವರ ಯೋಜನೆಯಂತೆ ಭಾರತದ ಯುವ ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡುವುದರ ಜತೆಗೆ, ಇಡೀ ಜಗತ್ತೇ ಇಂದು ಗೌರವಿಸುತ್ತಿರುವ ಪ್ರತಿಭಾವಂತ ಉದ್ಯಮಿಗಳನ್ನು ಬೆಳೆಸುವುದಾಗಿದೆ. ಈ ಬೆಳವಣಿಗೆ ಕಾಣಬೇಕೆಂದರೆ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿವೆ. ಅದರಲ್ಲಿ ಮುಖ್ಯವಾಗಿ, ಬಂಡವಾಳ, ಕಡಿಮೆ ಬಂಡವಾಳ ಹೂಡಿಕೆ, ಕಸ್ಟಮ್ಸ್ ಸಮಸ್ಯೆಗಳು, ತಯಾರಿಕಾ ಕ್ಷೇತ್ರದ ಮೇಲಿರುವ ಸುಂಕ ಇತ್ಯಾದಿಗಳಿವೆ. ಇವುಗಳು ಸರ್ಕಾರದ ಗಮನದಲ್ಲಿವೆ’ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.