ಪ್ಯಾರಿಸ್: ‘ಜಗತ್ತಿನ ಆಹಾರ ಬೆಲೆ ಸೂಚ್ಯಂಕವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಇದು ಕಳೆದ 18 ತಿಂಗಳಲ್ಲೇ ಅತಿ ಹೆಚ್ಚು’ ಎಂದು ವಿಶ್ವಸಂಸ್ಥೆ ಹೇಳಿದೆ.

2023ರ ಏಪ್ರಿಲ್ನಲ್ಲಿ ಒಮ್ಮೆ ಆಹಾರ ಬೆಲೆ ಗರಿಷ್ಠ ಮಟ್ಟ ತಲುಪಿತ್ತು. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಏರಿಕೆ ಉಂಟಾಗಿರುವುದರಿಂದ ಆಹಾರ ಬೆಲೆಯೂ ಗಗನಮುಖಿಯಾಗಿದೆ ಎಂದು ಈ ದಾಖಲೆಗಳು ಹೇಳುತ್ತವೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಈ ಸೂಚ್ಯಂಕವನ್ನು ಪ್ರಕಟಿಸಿದೆ. ಇದಕ್ಕಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಆಹಾರ ಪದಾರ್ಥಗಳನ್ನು ಪರಿಗಣಿಸಲಾಗುತ್ತದೆ. ಸೆಪ್ಟೆಂಬರ್ನಲ್ಲಿ ಈ ಸೂಚ್ಯಂಕವು 124.9 ಅಂಶಗಳಿತ್ತು. ಅದು ಈಗ 127.4 ಅಂಶಕ್ಕೆ ಏರಿಕೆಯಾಗಿದೆ.

ಸೂಚ್ಯಂಕದ ಮಾಹಿತಿ ಪ್ರಕಾರ ಅಡುಗೆ ಎಣ್ಣೆ ಶೇ 7ರಷ್ಟು ಏರಿಕೆಯಾಗಿದೆ. ತಾಳೆ ಉತ್ಪಾದನೆಯಲ್ಲಿನ ಕುಸಿತ ಈ ಬೆಲೆ ಏರಿಕೆಗೆ ಕಾರಣ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಮಾಂಸದ ಬೆಲೆಯೂ ಏರಿಕೆಯಾಗಿದೆ ಎಂದು ಈ ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.