ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಈ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ. ಮೂರೂ ಕ್ಷೇತ್ರಗಳ ಮತದಾನದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಶಿಗ್ಗಾವಿಯ ಮತಗಟ್ಟೆಯೊಂದರಲ್ಲಿ ಸರತಿ ಸಾಲಲ್ಲಿ ಮಹಿಳೆಯರು
– ಪ್ರಜಾವಾಣಿ ಚಿತ್ರೆ
ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು ತಮ್ಮ ಊರಾದ ಚಕ್ಕೆರೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲು ಮತದಾರರು ಸಾಲಾಗಿ ನಿಂತಿದ್ದ ದೃಶ್ಯ
–ಪ್ರಜಾವಾಣಿ ಚಿತ್ರ
ಮತ ಚಲಾಯಿಸಲು ಉತ್ಸಾಹದಿಂದ ಬಂದ ಜನ
– ಪ್ರಜಾವಾಣಿ
ನಾನು ಮತ ಚಲಾವಣೆ ಮಾಡಿದ್ದೇನೆ, ಖುಷಿಯಾಗಿದೆ. ಎಲ್ಲ ಕಡೆ ಉತ್ತಮ ಸ್ಪಂದನೆ ಇದೆ. ನಾನು ಮೊದಲ ಬಾರಿ ಅಭ್ಯರ್ಥಿ ಆಗಿ ಮತದಾನ ಮಾಡಿದ್ದೇನೆ. ಇದು ಹೊಸ ಅನುಭವ. ಮತದಾನದ ಮೂಲಕ ಎಲ್ಲರೂ ಹಕ್ಕು ಚಲಾವಣೆಮಾಡಬೇಕುಅನ್ನಪೂರ್ಣ, ಸಂಡೂರು ಅಭ್ಯರ್ಥಿ
ನಾವು ಕುಟುಂಬ ಸಮೇತರಾಗಿ ಮತದಾನ ಮಾಡಿದ್ದೇವೆ. ಸಂವಿಧಾನದ ಆಶಯದಂತೆ ಎಲ್ಲರೂ ಮತದಾನ ಮಾಡಬೇಕು. ಸಂವಿಧಾನ ವ್ಯವಸ್ಥೆಯಲ್ಲಿ ಯಾರೂ ಮತದಾನದಿಂದ ಹೊರಗೆ ಉಳಿಯಬಾರದು ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಕಾಂಗ್ರೆಸ್ ಸದಾ ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತದೆತುಕಾರಾಂ, ಸಂಸದ
ಸಂಡೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ: ಬೆಳಗ್ಗೆ 9 ಗಂಟೆ ವರೆಗೆ ಶೇ. 10.11ರಷ್ಟು ಮತದಾನವಾಗಿದೆ.
ಮತ ಚಲಾಯಿಸಿದ ತುಕರಾಂ ದಂಪತಿ
ಸಂಡೂರು ಪಟ್ಟಣದ ಕೃಷ್ಣನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 13ರಲ್ಲಿ ಲಥೀಫ್ ಸಾಬ್ ಎಂಬ 78 ವರ್ಷದ ವೃದ್ಧರೊಬ್ಬರು ವೀಲ್ ಚೇರ್ ಸಹಾಯದೊಂದಿಗೆ ಬಂದು ಮತದಾನ ಮತದಾನ ಮಾಡಿದರು.
ಸಂಡೂರು ಪಟ್ಟಣದ ಬೂತ್-67 ರಲ್ಲಿ ಸಚಿವ ಸಂತೋಷ್ ಲಾಡ್ ತಾಯಿ ಶೈಲಜಾ ಎಸ್.ಲಾಡ್ , ಸಹೋದರಿ ಸುಜಾತಾ ಲಾಡ್ ಮತದಾನ
-ಪ್ರಜಾವಾಣಿ ಚಿತ್ರ